ಜಯಂತಿ ಎಸ್. ಬಂಗೇರ ಇವರು ಮೂಡಬಿದಿರೆಯ ಪ್ರಥಮ ಲೇಖಕಿ,ಇವರು "ಕಿತ್ತೂರು ರಾಣಿ ಚೆನ್ನಮ್ಮ" ಪ್ರಶಸ್ತಿ ಪಡೆದಿದ್ದಾರೆ.ಇವರ ಸಾಹಿತ್ಯ ಕೆಲಸಗಳು ಅಪಾರ.ಕಥೆ, ಕಾದಂಬರಿ,ನಾಟಕ ಹೀಗೆ ಎಲ್ಲದರಲ್ಲೂ ಪಳಗಿರುವ ಇವರು ನಟಿಯಾಗಿಯೂ ಗುರುತಿಸಿಕೊಂಡವರು.ಕನ್ನಡ- ತುಳು ಎರಡು ಭಾಷೆಗಳಲ್ಲೂ ನಾಟಕಗಳನ್ನೆಲ್ಲಾ ಬರೆಯುವುದಾದರೂ ತುಳುವಿನ ಮೇಲೆ ಅಪಾರ ಪ್ರೀತಿ ಇತ್ತು. == ಕೃತಿ == ಇವರ ಮೊದಲ ಕೃತಿ 'ಮನಸ್ಸ್ ಬದಲಾನಗ' == ಕಾದಂಬರಿ == ಸೊರಗೆದ ಪೂ == ನಾಟಕಗಳು == ಮಾಯಿದ ಪುಣ್ಯಮೆ ಸತ್ಯ ನೆಗಪುನಗ ಮಾಪು ಮಲ್ಪುಲ ಮುಂತಾದವು == ಪ್ರಶಸ್ತಿಗಳು == === ಈ ಮೇಲ್ಕಂಡ ಕೃತಿ, ಕಾದಂಬರಿ, ನಾಟಕಗಳಿಗೆ ಇವರಿಗೆ ದೊರಕಿರುವ ಪ್ರಶಸ್ತಿಗಳು; === ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತುಳುಕೂಟ, ಉಡುಪಿ ಇವರಿಂದ ೨೦೦೨ರ ಎಸ್.ಯು.ಪಣಿಯಾಡಿ ಪ್ರಶಸ್ತಿ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತುಳುನಾಡ ತುಳುಶ್ರೀ ಪ್ರಶಸ್ತಿ == ಇತರ ಮಾಹಿತಿಗಳು == ಇವರು ನಟಿಯಾಗಿ ದಕ್ಷಿಣಕನ್ನಡದಿಂದಾಚೆ ಬೆಂಗಳೂರು,ದೆಹಲಿಗಳಲ್ಲಿಯೂ ಅಭಿನಯಿಸಿದ್ದಾರೆ. 'ಬಂದೇ ಬರತಾವ ಕಾಲ' ಟಿ.ವಿ. ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಈಗ ಏನನ್ನಾದರೂ ಸಾಧಿಸಬೇಕೆಂಬ ತುಡಿತವಿರುವ ಇವರು ತುಳು ಪತ್ರಿಕೆಯೊಂದನ್ನು ಹೊರತರುವ ತರತುರಿಯಲ್ಲಿದ್ದಾರೆ. == ಉಲ್ಲೇಖ ==